Friday, February 12, 2010

ಕಣ್ಣೀರು

ಆಗದ ನಯನದಿ
ದಿನವು ಸೋರುವ
ಹನಿಗಳ ಮುತ್ತು
ಮತ್ತೆ ಮತ್ತೆ
ನೆನಪುಗಳ ನೆನೆದು...

ಆಣೆ

ನನ್ನ ಆಣೆ
ನಗುವ ಮರೆತರೆ
ನೆನೆದು ಅತ್ತರೆ
ಆ ನನ್ನ ಕಣ್ಣಲಿ
ನೀ ನೀರ ತಂದರೆ.....

ಮಾತು

ಮಾತು ಮುಥಂತೆ
ಮಣ್ಣ ಮಾಡಬೇಡ,
ನುಡಿದರೆ ಎರಡು ನುಡಿ
ಸಿಹಿ ಜೇನು ಸವಿದಂತೆ....

ಕುವೆಂಪು

ಹಿರಿದರು ಕನ್ನಡದ ಸಂಪು
ಬರೆದರು ಅದರ ಕಂಪು
ಅರಿತವರ ತಲೆ ತಂಪು
ನುರಿತವರೆ ಕನ್ನಡದ ಕುವೆಂಪು....

ನೆರಳು

ನನ್ನೇ ತಿರುಗಿದೆ
ನನ್ನೀ ನೆರಳು ,
ನಗುತ, ನಗುತ
ನನ್ನನು ಅಳಿಸಿ .

ಎಲ್ಲರು ಇದ್ದು
ಇಲ್ಲದ ಹಾಗೆ ,
ಎಲ್ಲರು ಬೈದು
ನಕ್ಕ ಹಾಗೆ ,

ನಕ್ಕೆ ನಾನೂ
ಏಕೋ ಒಬ್ಬನೇ,
ನಾನೆ ನನಗೆ !
ಊಳಿದ ಕೊನೆಗೆ.,







Sunday, February 7, 2010

ಯುವ ಬೆಂಗಳೂರು

ಪ್ರತಿಯೊಬ್ಬ ಯುವಕ
ಅಗಲಿ ನಾಯಕ ,
ಮಾಡಲೊಂದು ಕಾಯಕ .
ಯುವ ಬೆಂಗಳೂರು

ದುಡಿಮೆಯೇ ದೇವರು ,
ಸೇವೆನು ದೇವರೇ ,
ಸಾಧನೆ ಹಾದಿಗೆ ,
ಎರಡು ಸಹಾಯಕ .
ಯುವ ಬೆಂಗಳೂರು

ನಾಳಿನ ನಾಡಿಗೆ
ನಗುವನು ನೀಡೋಣ ,
ಜೋಡಿಸು ಕೈ
ಜೋರಾಗಿ ಕುಗೋಣ .
ಯುವ ಬೆಂಗಳೂರು

ಸರಸ್ವತಿ ಮಡಿಲು
ನಮಗೆ ನೆರಳು ,
ಕೈ ಬಿಡಳು ಎಂದು
ನಡಿ ನೀ ಮುಂದು.
ಯುವ ಬೆಂಗಳೂರು.